Shri Falahar Shivayogeshwar Shikshana Samiti's
Admission & Reservation Policy
 

 

ಪ್ರಥಮ ಸೆಮಿಸ್ಟರ್ ಡಿಪ್ಲೋಮ ಪ್ರವೇಶ (ಆದ್ಮಿಸ್ಸಿಒನ್ ಫೊಲಿಚ್ಯ್:)
ಪ್ರಥಮ ವರ್ಷದ ಸರ್ಕಾರಿ /ಅನುದಾನಿತ /ಖಾಸಗಿ ( ಸುರ್ರೆನ್ದೆರೆದ್ ಸೆಅತ್ಸ್ ) ಪಾಲಿಟೆಕ್ನಿಕ್ ಗಳಿಗೆ ಪ್ರವೇಶವನ್ನುKarnataka Examination Authority(KEA) ಮತ್ತು NIC ಸಹಯೋಗದೊಂದಿಗೆ ಮಾಡಲಾಗುವುದು. ಪ್ರವೇಶ ಪ್ರಕ್ರಿಯೆಯು ಸಾಮಾನ್ಯವಾಗಿ ರಾಜ್ಯದ ಸುದ್ದಿ ಪತ್ರಿಕೆಗಳಲ್ಲಿ ಅಧಿಸೂಚನೆಯನ್ನು ಹೊರಡಿಸುವ ಮುಖಾಂತರ ಪ್ರಾರಂಭವಾಗುತ್ತದೆ. ಏಪ್ರಿಲ್ ಕೊನೆಯ ವಾರ ಅಥವಾ ಮೇ ಮೊದಲ ವಾರದಲ್ಲಿ ಸಾಮಾನ್ಯವಾಗಿ SSLC ಫಲಿತಾಂಶಗಳನ್ನು ಘೋಷಿಸುವ ದಿನಾಂಕದ ಸುತ್ತ ಮುತ್ತ ಜಾಹಿರಾತನ್ನು ಪ್ರಕಟಿಸಲಾಗುವುದು. ಈ ಪ್ರಕಟನೆಯನ್ನು http://dte.kar.nic.in ಮತ್ತು www.kea.kar.nic.in  ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗುವುದು ಹಾಗು ಪಾಲಿಟೆಕ್ನಿಕ್ ವೆಬ್ ಸೈಟ್ ನಲ್ಲಿ ಸಹ ಪ್ರವೇಶ ಪ್ರಕಟಣೆಯ ವಿವರಗಳು ಇರುತ್ತದೆ

 

ಪ್ರವೇಶ ಪ್ರಕ್ರಿಯೆ
ಅಭ್ಯರ್ಥಿಗಳು ಸ್ವತಃ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ಅಧಿಕೃತ ವೆಬ್ ಸೈಟ್
www.kea.kar.nic.in ಮತ್ತು  http://dte.kar.nic.in ಗಳಲ್ಲಿರುವ ಅರ್ಜಿ ನಮೂನೆ ಹಾಗೂ ಮಾಹಿತಿ ಪುಸ್ತಕವನ್ನು ಡೌನ್ ಲೋಡ್ ಮಾಡಿಕೊಂಡು ಅರ್ಜಿಯನ್ನು ಮಾಹಿತಿ ಪುಸ್ತಕದಲ್ಲಿರುವ ಸೂಚನೆಗಳನ್ವಯ ಸಂಪೂರ್ಣ ಭರ್ತಿ ಮಾಡುವುದು. ಡಿಪ್ಲೋಮಾ ಪ್ರವೇಶದ ಆಯ್ಕೆಯು ಅರ್ಹತೆ ಮೇಲೆ ಆದರಿಸಿರುತ್ತದೆ. ಒಟ್ಟು ಸ್ಥಾನಗಳಲ್ಲಿ ಶೇಕಡ ೫೦ರಷ್ಟು ಸಮಾಜದ ವಿವಿಧ ಗುಂಪುಗಳಿಗೆ ಮೀಸಲಿರಿಸಲಾಗಿದೆ. ಉಳಿದ ಶೇಕಡ 50 ರಷ್ಟು ಸ್ಥಾನಗಳನ್ನು SSLC ಯಲ್ಲಿ ಗಳಿಸಿದ ಅಂಕಗಳನ್ನು ಆಧರಿಸಿ ನೀಡಲಾಗುತ್ತದೆ. ಅಲ್ಲದೆ ತಾಂತ್ರಿಕ ಕೋರ್ಸುಗಳ ಪ್ರವೇಶಕ್ಕೆ ಅಭ್ಯರ್ಥಿ ಗಳಿಸಿದ SSLC ಯ ಒಟ್ಟು ಅಂಕಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದು. ಡಿಪ್ಲೋಮ ಪ್ರವೇಶದ ಎಲ್ಲಾ ವಿವರಗಳು Admission Brochure ನಲ್ಲಿ ಇರುತ್ತದೆ.

 

ಡಿಪ್ಲೋಮಾ ಪ್ರವೇಶಕ್ಕೆ ಇರಬೇಕಾದ ಅರ್ಹತೆ
೧)ಅಭ್ಯರ್ಥಿಯು ಭಾರತೀಯ ಪ್ರಜೆಯಾಗಿರಬೇಕು; ಮತ್ತು
೨)ಇಂಜಿನಿಯರಿಂಗ್ ಕೋರ್ಸುಗಳ ಪ್ರವೇಶಕ್ಕೆ ಸಂಬಂಧಿಸಿದಂತೆ ವಿದ್ಯಾರ್ಹತೆ: ಕರ್ನಾಟಕ ಶ್ಶ್ಳ್ಛ್ ಅಥವಾ ತತ್ಸಮಾನ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಒಟ್ಟಾರೆಯಾಗಿ ಕನಿಷ್ಠ ಶೇ.35 ಅಂಕಗಳನ್ನು ಕಡ್ಡಾಯವಾಗಿ ಪಡೆದಿರಬೇಕು.
೩) ಅಭ್ಯರ್ಥಿಯು ಕರ್ನಾಟಕದಲ್ಲಿ ಒಂದನೇ ತರಗತಿಯಿಂದ ಅರ್ಹತಾ (SSLC/PUC) ಪರೀಕ್ಷೆಯನ್ನೊಳಗೊಂಡು ೦೫ ವರ್ಷಗಳ ವ್ಯಾಸಂಗ ಮಾಡಿರಬೇಕು.
೪) CBSE/ICSE ಅಥವಾ ಕರ್ನಾಟಕೇತರ ರಾಜ್ಯದಲ್ಲಿ ಶ್ಶ್ಳ್ಛ್/ತತ್ಸಮಾನ ವ್ಯಾಸಂಗ ಮಾಡಿದ ಅಭ್ಯರ್ಥಿಗಳು ತಾಂತ್ರಿಕ ಪರೀಕ್ಷಾ ಮಂಡಳಿ, ಅರಮನೆ ರಸ್ತೆ, ಬೆಂಗಳೂರು-
560001 ಇಲ್ಲಿಂದ ಅರ್ಹತಾ ಪ್ರಮಾಣ ಪತ್ರವನ್ನು ಪಡೆದು ದಾಖಲೆ ಪರಿಶೀಲನೆ ಸಂದರ್ಭದಲ್ಲಿ ಕಡ್ಡಾಯವಾಗಿ ಹಾಜರುಪಡಿಸತಕ್ಕದ್ದು

 

ಲ್ಯಾಟರಲ್ ಎಂಟ್ರಿ ಕೋಟಾ (20% of intake)
I.T.I ಪಾಸಾದ ವಿದ್ಯಾರ್ಥಿಗಳು ಲ್ಯಾಟರಲ್ ಎಂಟ್ರಿ ಮುಖಾಂತರ ೩ನೇ ಸೆಮಿಸ್ಟರ್ /೨ನೇ ವರ್ಷ ಡಿಪ್ಲೋಮಾ ಪ್ರವೇಶ ಪಡೆಯಲು ಇಚ್ಛಿಸಿದಲ್ಲಿ ಅಂತಹ ಅಭ್ಯರ್ಥಿಗಳು 2017-18 ನೇ ಸಾಲಿಗೆ ಆನ್-ಲೈನ್ ಮುಖಾಂತರವೇ ನೋಡಲ್ ಕೇಂದ್ರಗಳ ಮೂಲಕ ಸಲ್ಲಿಸಬಹುದಾಗಿದೆ. ಸದರಿ ಅಭ್ಯರ್ಥಿಗಳು ಜೆ.ಟಿ.ಎಸ್ ಕೋಟಾದಲ್ಲಿ ಕಾಯ್ದಿರಿಸಿರುವ ಸ್ಥಾನಗಳಿಗೆ ಮಾತ್ರ ಪ್ರವೇಶ ಪಡೆಯಲು ಅರ್ಹರಾಗಿರುತ್ತಾರೆ. ಜೆ. ಟಿ .ಎಸ್ ನ (03 ವರ್ಷಗಳ ಅವಧಿ ) ಮತ್ತು ಐ.ಟಿ.ಐ ನ (02 ವರ್ಷಗಳ ಅವಧಿ) ಸಂಬಂಧಿಸಿದ ಟ್ರೇಡ್ ನಲ್ಲಿ ಉತ್ತೀರ್ಣರಾಗಿರುವ ಅಭ್ಯರ್ಥಿಗಳಿಗೆ ಆಯಾ ಟ್ರೇಡ್ ನ ಅರ್ಹತೆಗನುಗುಣವಾಗಿ ಡಿಪ್ಲೋಮಾ ಕೋರ್ಸಿಗೆ ಪರಿಗಣಿಸಲಾಗುವುದು.